ಗ್ರಾಬ್, ಕ್ರಿಸ್‍ಟ್ಯಾನ್ ಡೀಟ್ರ್ರಕ್ -
1801-1836. ಜರ್ಮನ್ ನಾಟಕಕಾರ. ಜೈಲಿನ ಅಧಿಕಾರಿಯೊಬ್ಬನ ಮಗ. ನ್ಯಾಯಶಾಸ್ತ್ರವನ್ನು ಅಭ್ಯಸಿಸಿದ್ದರೂ ನಾಟಕಕಾರನಾಗಿಯೇ ಉಳಿದ. ಈತ ಜರ್ಮನ್ ಭಾಷೆಯಲ್ಲಿ ಕೆಲವು ನಾಟಕಕಾರನಗಾಗಿಯೇ ಉಳಿದ. ಈತ ಜರ್ಮನ್ ಭಾಷೆಯಲ್ಲಿ ಕೆಲವು ನಾಟಕಗಳನ್ನು ರಚಿಸಿದ್ದಾನೆ. ಗ್ರಾಬ್ ತುಂಬ ಅವ್ಯವಸ್ಥಿತ ಜೀವನವನ್ನು ನಡೆಸಿದ. ಈತನನ್ನು ತಿದ್ದಲು ಆಪ್ತಸ್ನೇಹಿತರು ಮಾಡಿದ ಪ್ರಯತ್ನವೆಲ್ಲ ವಿಫಲವಾಯಿತು. ತನ್ನ ದುರಾಚಾರಗಳಿಂದಾಗಿ ಈತ ಅಕಾಲ ಮರಣಕ್ಕೆ ತುತ್ತಾದ. ಜರ್ಮನ್ ಭಾಷೆಯಲ್ಲಿ ಈತನ ದುರಂತಮಯ ಜೀವನವನ್ನು ಆಧರಿಸಿ ಒಂದು ನಾಟಕ ಮತ್ತು ಒಂದು ಕಾದಂಬರಿ ರಚಿತವಾಗಿವೆ. ಈತನ ಹಲವಾರು ನಾಟಕಗಳಲ್ಲಿ ಸ್ವತಂತ್ರ ವಿಚಾರಸಂಪತ್ತು ಮತ್ತು ಸೊಗಸಾದ ಭಾವಗಳನ್ನು ಕಾಣಬಹುದು. ಆದರೆ ಅವು ರಂಗಮಂದಿರದ ಅವಶ್ಯಕತೆಗಳಿಗೆ ತಕ್ಕವಾಗಿಲ್ಲ. 1829ರಲ್ಲಿ ರಚಿತವಾದ ಡಾನ್ ಜುವಾನ್ ಉಂಟ್ ಫೌಸ್ಟ್ ಮತ್ತು ಐತಿಹಾಸಿಕ ಕಾದಂಬರಿಗಳಾದ ಫ್ರೀಡ್ರಿಕ್ ಬಾರ್ಬರೋಸ (1829). ಹೈನ್ರಿಕ್ ಗಿI (1830) ಮತ್ತು ನೆಪೋಲಿಯನ್ನ ಓಡರ್ ಡೀ ಹುಂಡರ್ಟ್ ಟಾಗೆ (1831)-ಇವು ಈತನ ಉತ್ತಮ ಕೃತಿಗಳು. ಡಾನ್ ಜುವಾನ್ ಉಂಟ್ ಫೌಸ್ಟ್‍ನಲ್ಲಿ ಗ್ರಾಬ್‍ನ ಧೀರಕಲ್ಪನೆಯನ್ನು ಕಾಣಬಹುದು. ಹೈನ್ರಿಕ್ ಗಿI, ನೆಪೋಲಿಯನ್ ಓಡರ್ ಡೀ ಹುಂಡರ್ಟ್ ಟಾಗೆಯಲ್ಲಿ ವಾಟರ್‍ಲೂ ಕದನವನ್ನು ರಂಗಭೂಮಿಯ ಮೇಲೆ ತೋರಿಸುವ ಒಂದು ಯತ್ನ ನಡೆದಿದೆ. ಈತನ ಪ್ರತಿಭೆ ಮತ್ತು ವಿಲಕ್ಷಣಗಳಿಗೆ ನಿದರ್ಶನಗಳಾಗಿರುವ ಇವೆರಡೂ ಈತನ ಯಶಸ್ವೀ ನಾಟಕಗಳು.							(ಎಸ್.ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ